Skip to content
Text size 100%
ಕನ್ನಡ · Surah 73

Al-Muzzammil — Kannada Translation

The Enshrouded One · 20 verses · Kannada Translation - Hamza Butur.

Al-Muzzammil · Kannada Translation - Hamza ButurVerse 1 of 20
Jump to verse
Search translation

Search the locally cached translation.

Verses of Al-Muzzammil

1

بِسْمِ ٱللَّهِ ٱلرَّحْمَٰنِ ٱلرَّحِيمِ يَٰٓأَيُّهَا ٱلْمُزَّمِّلُ

ಓ ಬಟ್ಟೆಯನ್ನು ಹೊದ್ದುಕೊಂಡವರೇ![1]

Translator’s notes
[1] ಈ ವಚನವು ಅವತೀರ್ಣವಾಗುವಾಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಚಾದರ ಹೊದ್ದು ಮಲಗಿದ್ದರು.
2

قُمِ ٱلَّيْلَ إِلَّا قَلِيلًۭا

ರಾತ್ರಿಯಲ್ಲಿ ನಮಾಝ್ ನಿರ್ವಹಿಸಿರಿ. ಆದರೆ ಸ್ವಲ್ಪ ಭಾಗದ ಹೊರತು.

3

نِّصْفَهُۥٓ أَوِ ٱنقُصْ مِنْهُ قَلِيلًا

ರಾತ್ರಿಯ ಅರ್ಧ ಭಾಗ. ಅಥವಾ ಅದಕ್ಕಿಂತ ಸ್ವಲ್ಪ ಕಡಿಮೆ.

4

أَوْ زِدْ عَلَيْهِ وَرَتِّلِ ٱلْقُرْءَانَ تَرْتِيلًا

ಅಥವಾ ಅದಕ್ಕಿಂತ ಸ್ವಲ್ಪ ಹೆಚ್ಚು.[1] ಕುರ್‌ಆನನ್ನು ನಿಧಾನವಾಗಿ ನಿಲ್ಲಿಸಿ ನಿಲ್ಲಿಸಿ ಪಠಿಸಿರಿ.

Translator’s notes
[1] ಇಲ್ಲಿ ಹೇಳಿರುವುದು ರಾತ್ರಿ ನಿರ್ವಹಿಸುವ ತಹಜ್ಜುದ್ ನಮಾಝಿನ ಬಗ್ಗೆ. ಈ ನಮಾಝ್ ರಾತ್ರಿಯ ಅರ್ಧ ಭಾಗ, ಅಥವಾ ಅದಕ್ಕಿಂತ ಸ್ವಲ್ಪ ಕಡಿಮೆ (ಮೂರನೇ ಒಂದು ಭಾಗ) ಅಥವಾ ಅದಕ್ಕಿಂತ ಸ್ವಲ್ಪ ಹೆಚ್ಚು (ಮೂರನೇ ಎರಡು ಭಾಗ) ಆಗಿರುವುದರಲ್ಲಿ ತೊಂದರೆಯಿಲ್ಲ.
5

إِنَّا سَنُلْقِى عَلَيْكَ قَوْلًۭا ثَقِيلًا

ನಿಶ್ಚಯವಾಗಿಯೂ ನಾವು ಸದ್ಯವೇ ನಿಮ್ಮ ಮೇಲೆ ಭಾರವಾದ ವಚನವನ್ನು ಅವತೀರ್ಣಗೊಳಿಸುವೆವು.

6

إِنَّ نَاشِئَةَ ٱلَّيْلِ هِىَ أَشَدُّ وَطْـًۭٔا وَأَقْوَمُ قِيلًا

ನಿಶ್ಚಯವಾಗಿಯೂ ರಾತ್ರಿಯಲ್ಲಿ ಎದ್ದೇಳುವುದು ಮನೋದಾರ್ಢ್ಯಕ್ಕೆ ಹೆಚ್ಚು ಸೂಕ್ತವಾಗಿದೆ ಮತ್ತು ಮಾತನ್ನು ಅತ್ಯಂತ ಸರಿಯಾಗಿಸುತ್ತದೆ.

7

إِنَّ لَكَ فِى ٱلنَّهَارِ سَبْحًۭا طَوِيلًۭا

ನಿಶ್ಚಯವಾಗಿಯೂ ನಿಮಗೆ ಹಗಲಿನಲ್ಲಿ ದೀರ್ಘ ಕೆಲಸವಿದೆ.

8

وَٱذْكُرِ ٱسْمَ رَبِّكَ وَتَبَتَّلْ إِلَيْهِ تَبْتِيلًۭا

ನೀವು ನಿಮ್ಮ ಪರಿಪಾಲಕನ (ಅಲ್ಲಾಹನ) ಹೆಸರನ್ನು ಸ್ಮರಿಸಿರಿ. (ಇತರ ಎಲ್ಲಾ ವಿಷಯಗಳಿಂದ ದೂರವಾಗಿ) ನಿಮ್ಮನ್ನು ಸಂಪೂರ್ಣವಾಗಿ ಅವನಿಗೆ ಅರ್ಪಿಸಿಕೊಳ್ಳಿರಿ.

9

رَّبُّ ٱلْمَشْرِقِ وَٱلْمَغْرِبِ لَآ إِلَٰهَ إِلَّا هُوَ فَٱتَّخِذْهُ وَكِيلًۭا

ಅವನು ಪೂರ್ವ ಮತ್ತು ಪಶ್ಚಿಮದ ಪರಿಪಾಲಕನು. ಅವನ ಹೊರತು ಆರಾಧನೆಗೆ ಅರ್ಹರಾದ ಬೇರೆ ದೇವರಿಲ್ಲ. ಅವನನ್ನು ನಿಮ್ಮ ಕಾರ್ಯನಿರ್ವಾಹಕನಾಗಿ ಮಾಡಿಕೊಳ್ಳಿ.

10

وَٱصْبِرْ عَلَىٰ مَا يَقُولُونَ وَٱهْجُرْهُمْ هَجْرًۭا جَمِيلًۭا

ಅವರು ಹೇಳುತ್ತಿರುವುದನ್ನು ತಾಳ್ಮೆಯಿಂದ ಸಹಿಸಿರಿ ಮತ್ತು ಅತ್ಯಂತ ಮನೋಹರವಾಗಿ ಅವರಿಂದ ದೂರವಾಗಿರಿ.

11

وَذَرْنِى وَٱلْمُكَذِّبِينَ أُو۟لِى ٱلنَّعْمَةِ وَمَهِّلْهُمْ قَلِيلًا

ನನ್ನನ್ನು ಮತ್ತು ಸುಖಾಡಂಬರಗಳ ಜನರಾದ ಆ ನಿಷೇಧಿಗಳನ್ನು ಬಿಟ್ಟು ಬಿಡಿ.[1] ಅವರಿಗೆ ಸ್ವಲ್ಪ ಕಾಲಾವಕಾಶ ನೀಡಿರಿ.

Translator’s notes
[1] ಅಂದರೆ ಅವರನ್ನು ನನಗೆ ಬಿಟ್ಟು ಬಿಡಿ. ನಾನು ಅವರನ್ನು ನೋಡಿಕೊಳ್ಳುತ್ತೇನೆ.
12

إِنَّ لَدَيْنَآ أَنكَالًۭا وَجَحِيمًۭا

ನಿಶ್ಚಯವಾಗಿಯೂ ನಮ್ಮ ಬಳಿ ಬಲಿಷ್ಠ ಬೇಡಿಗಳು ಮತ್ತು ಜ್ವಲಿಸುವ ಅಗ್ನಿಯಿದೆ.

13

وَطَعَامًۭا ذَا غُصَّةٍۢ وَعَذَابًا أَلِيمًۭا

ಉಸಿರುಗಟ್ಟಿಸುವ ಆಹಾರ ಮತ್ತು ಯಾತನಾಮಯ ಶಿಕ್ಷೆಯಿದೆ.

14

يَوْمَ تَرْجُفُ ٱلْأَرْضُ وَٱلْجِبَالُ وَكَانَتِ ٱلْجِبَالُ كَثِيبًۭا مَّهِيلًا

ಭೂಮಿ ಮತ್ತು ಪರ್ವತಗಳು ರಭಸದಿಂದ ಅಲುಗಾಡುವ ದಿನ. ಪರ್ವತಗಳು ಹರಿಯುವ ಮರಳ ರಾಶಿಯಂತಾಗುವ ದಿನ.

15

إِنَّآ أَرْسَلْنَآ إِلَيْكُمْ رَسُولًۭا شَٰهِدًا عَلَيْكُمْ كَمَآ أَرْسَلْنَآ إِلَىٰ فِرْعَوْنَ رَسُولًۭا

ನಿಶ್ಚಯವಾಗಿಯೂ ನಾವು ನಿಮ್ಮ ಮೇಲೆ ಸಾಕ್ಷಿಯಾಗಿ ಒಬ್ಬ ಸಂದೇಶವಾಹಕರನ್ನು ಕಳುಹಿಸಿದ್ದೇವೆ. ಫರೋಹನ ಬಳಿಗೆ ಒಬ್ಬ ಸಂದೇಶವಾಹಕರನ್ನು ಕಳುಹಿಸಿದಂತೆ.

16

فَعَصَىٰ فِرْعَوْنُ ٱلرَّسُولَ فَأَخَذْنَٰهُ أَخْذًۭا وَبِيلًۭا

ಆದರೆ ಫರೋಹನು ಆ ಸಂದೇಶವಾಹಕರನ್ನು ಅನುಸರಿಸಲಿಲ್ಲ. ಆದ್ದರಿಂದ ನಾವು ಅವನನ್ನು ಬಲಿಷ್ಠ ಹಿಡಿತದೊಂದಿಗೆ ಹಿಡಿದೆವು.

17

فَكَيْفَ تَتَّقُونَ إِن كَفَرْتُمْ يَوْمًۭا يَجْعَلُ ٱلْوِلْدَٰنَ شِيبًا

ನೀವು ನಿಷೇಧಿಸುವುದಾದರೆ ಮಕ್ಕಳನ್ನು ನೆರೆತ ಕೂದಲಿನವರಾಗಿ ಮಾಡುವ[1] ಆ ದಿನ ನೀವು ಹೇಗೆ ತಾನೇ ರಕ್ಷಣೆ ಪಡೆಯುವಿರಿ?

Translator’s notes
[1] ಅಂದರೆ ಅಂತ್ಯದಿನದ ಭಯವಿಹ್ವಲತೆಯಿಂದ ಮಕ್ಕಳು ವೃದ್ಧರಂತಾಗಿ ಬಿಡುವರು.
18

ٱلسَّمَآءُ مُنفَطِرٌۢ بِهِۦ ۚ كَانَ وَعْدُهُۥ مَفْعُولًا

ಆ ದಿನ ಆಕಾಶವು ಒಡೆಯುವುದು. ಅಲ್ಲಾಹನ ವಾಗ್ದಾನವು ನೆರವೇರಿಯೇ ತೀರುತ್ತದೆ.

19

إِنَّ هَٰذِهِۦ تَذْكِرَةٌۭ ۖ فَمَن شَآءَ ٱتَّخَذَ إِلَىٰ رَبِّهِۦ سَبِيلًا

ನಿಶ್ಚಯವಾಗಿಯೂ ಇದೊಂದು ಉಪದೇಶವಾಗಿದೆ. ಆದ್ದರಿಂದ ಇಷ್ಟವಿರುವವರು ತಮ್ಮ ಪರಿಪಾಲಕನ (ಅಲ್ಲಾಹನ) ಕಡೆಗೆ ಮಾರ್ಗವನ್ನು ಸ್ವೀಕರಿಸಿಕೊಳ್ಳಲಿ.

20

۞ إِنَّ رَبَّكَ يَعْلَمُ أَنَّكَ تَقُومُ أَدْنَىٰ مِن ثُلُثَىِ ٱلَّيْلِ وَنِصْفَهُۥ وَثُلُثَهُۥ وَطَآئِفَةٌۭ مِّنَ ٱلَّذِينَ مَعَكَ ۚ وَٱللَّهُ يُقَدِّرُ ٱلَّيْلَ وَٱلنَّهَارَ ۚ عَلِمَ أَن لَّن تُحْصُوهُ فَتَابَ عَلَيْكُمْ ۖ فَٱقْرَءُوا۟ مَا تَيَسَّرَ مِنَ ٱلْقُرْءَانِ ۚ عَلِمَ أَن سَيَكُونُ مِنكُم مَّرْضَىٰ ۙ وَءَاخَرُونَ يَضْرِبُونَ فِى ٱلْأَرْضِ يَبْتَغُونَ مِن فَضْلِ ٱللَّهِ ۙ وَءَاخَرُونَ يُقَٰتِلُونَ فِى سَبِيلِ ٱللَّهِ ۖ فَٱقْرَءُوا۟ مَا تَيَسَّرَ مِنْهُ ۚ وَأَقِيمُوا۟ ٱلصَّلَوٰةَ وَءَاتُوا۟ ٱلزَّكَوٰةَ وَأَقْرِضُوا۟ ٱللَّهَ قَرْضًا حَسَنًۭا ۚ وَمَا تُقَدِّمُوا۟ لِأَنفُسِكُم مِّنْ خَيْرٍۢ تَجِدُوهُ عِندَ ٱللَّهِ هُوَ خَيْرًۭا وَأَعْظَمَ أَجْرًۭا ۚ وَٱسْتَغْفِرُوا۟ ٱللَّهَ ۖ إِنَّ ٱللَّهَ غَفُورٌۭ رَّحِيمٌۢ

ನಿಶ್ತಯವಾಗಿಯೂ ನೀವು ಮತ್ತು ನಿಮ್ಮ ಜೊತೆಯಲ್ಲಿರುವ ಒಂದು ಗುಂಪು ಜನರು ಕೆಲವೊಮ್ಮೆ ರಾತ್ರಿಯ ಮೂರನೇ ಎರಡು ಭಾಗ, ಕೆಲವೊಮ್ಮೆ ರಾತ್ರಿಯ ಅರ್ಧ ಭಾಗ ಮತ್ತು ಕೆಲವೊಮ್ಮೆ ರಾತ್ರಿಯ ಮೂರನೇ ಒಂದು ಭಾಗದವರೆಗೆ ನಿಂತು ನಮಾಝ್ ಮಾಡುತ್ತೀರಿ ಎಂದು ನಿಮ್ಮ ಪರಿಪಾಲಕನಿಗೆ (ಅಲ್ಲಾಹನಿಗೆ) ಬಹಳ ಚೆನ್ನಾಗಿ ತಿಳಿದಿದೆ. ಅಲ್ಲಾಹನೇ ರಾತ್ರಿ-ಹಗಲುಗಳ (ದೀರ್ಘವನ್ನು) ನಿರ್ಣಯಿಸುವವನು. ಅದನ್ನು ಪೂರ್ಣವಾಗಿ ನೆರವೇರಿಸಲು ನಿಮಗೆ ಸಾಧ್ಯವಿಲ್ಲವೆಂದು ಅವನಿಗೆ ತಿಳಿದಿದೆ. ಆದ್ದರಿಂದ ಅವನು ನಿಮ್ಮ ಮೇಲೆ ಅನುಕಂಪ ತೋರಿದ್ದಾನೆ. ಆದ್ದರಿಂದ ನಿಮಗೆ ಎಷ್ಟು ಕುರ್‌ಆನ್ ಪಠಿಸಲು ಸಾಧ್ಯವೋ ಅಷ್ಟು ಪಠಿಸಿರಿ. ನಿಮ್ಮಲ್ಲಿ ರೋಗಿಗಳಿದ್ದಾರೆ, ಅಲ್ಲಾಹನ ಔದಾರ್ಯವನ್ನು ಹುಡುಕುತ್ತಾ (ಉಪಜೀವನಕ್ಕಾಗಿ) ಭೂಮಿಯಲ್ಲಿ ಸಂಚರಿಸುವವರಿದ್ದಾರೆ ಮತ್ತು ಅಲ್ಲಾಹನ ಮಾರ್ಗದಲ್ಲಿ ಹೋರಾಡುವವರಿದ್ದಾರೆ ಎಂದು ಅವನಿಗೆ ಚೆನ್ನಾಗಿ ತಿಳಿದಿದೆ. ಆದ್ದರಿಂದ ನಿಮಗೆ ಎಷ್ಟು ಕುರ್‌ಆನ್ ಪಠಿಸಲು ಸಾಧ್ಯವೋ ಅಷ್ಟು ಪಠಿಸಿರಿ. ನಮಾಝ್ ಸಂಸ್ಥಾಪಿಸಿರಿ ಹಾಗೂ ಝಕಾತ್ ನೀಡಿರಿ. ಅಲ್ಲಾಹನಿಗೆ ಅತ್ಯುತ್ತಮವಾದ ಸಾಲವನ್ನು ನೀಡಿರಿ. ನೀವು ನಿಮಗಾಗಿ ಏನೆಲ್ಲಾ ಒಳಿತುಗಳನ್ನು ಮುಂದಕ್ಕೆ ಕಳುಹಿಸುತ್ತೀರೋ ಅದನ್ನು ನೀವು ಅಲ್ಲಾಹನ ಬಳಿ ಅತ್ಯುತ್ತಮವಾಗಿ ಮತ್ತು ಅತಿದೊಡ್ಡ ಪ್ರತಿಫಲವಿರುವುದಾಗಿ ಕಾಣುವಿರಿ. ಅಲ್ಲಾಹನಲ್ಲಿ ಕ್ಷಮೆಯಾಚಿಸಿರಿ. ನಿಶ್ಚಯವಾಗಿಯೂ ಅಲ್ಲಾಹು ಕ್ಷಮಿಸುವವನು ಮತ್ತು ದಯೆ ತೋರುವವನಾಗಿದ್ದಾನೆ.

Al-Muzzammil in other Kannada translations

Source: QuranEnc.com · Version 1.0.3. Translation text is shown without rewriting.
Quran recitationReady
Open audio